Accessibility Options

Text Size:

ಸುನೀಲ್ ಹಳೆಯೂರು

Sunil Haleyur

Literary Journey

ಸುನೀಲ್ ಹಳೆಯೂರು, ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೂಕಿನ ಹಳೆಯೂರು ಗ್ರಾಮದವರು. ಕನ್ನಡದ ಹಿರಿಯ ಸಾಹಿತಿಗಳೂ ,ಅಂಕಣಕಾರರೂಆದ ಪ್ರೊ.ಎಚ್ಚೆಸ್ಕೆ ಅವರ ಹುಟ್ಟೂರು 1977ರ ಜೂನ್ 11ರಂದು ಜನನ. ತಂದೆ ಹಿರಣ್ಣಯ್ಯ, ತಾಯಿ-ಪ್ರಭಾವತಿ. ಕೆ ಆರ್ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಹಿರಿಯ ಮಾರಾಟ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಾಳು ಬಾಳದೇ ಬಿಡದು (ಕವನ ಸಂಕಲನ), ನವ್ಯಜೀವಿ (ಮುಕ್ತಕಗಳ ವ್ಯಾಖ್ಯಾನ) ಹಾಗೂ ಮನದೊಳಮಿಡಿತ ಇವರ ಕೃತಿಗಳು.ನಾಡಿನ ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಸುನೀಲ್ ಹಳೆಯೂರು ಅವರು ಭಾವಜೀವಿ ಮತ್ತು ಸ್ನೇಹಜೀವಿ. ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಸಮಾಜ ಸೇವೆ, ಪರಿಸರ ಸಂರಕ್ಷಣೆಯ ಜೊತೆ ಜೊತೆಗೆ ಸಾಹಿತ್ಯದ ಆಸಕ್ತಿಯನ್ನು ಇಟ್ಟುಕೊಂಡವರು.ಓದಿನ ಬಗ್ಗೆ ಅವರಿಗೆ ಒಳ್ಳೆಯ ಅಭಿರುಚಿ ಇರುವುದರೊಡನೆ ಇತರರೂ ಕೂಡ ಕನ್ನಡ ಪುಸ್ತಕಗಳನ್ನು ಓದುವಂತೆಯೂ ಮತ್ತು ಕನ್ನಡದಲ್ಲಿ ಕವನವನ್ನೋ, ಬರಹಗಳನ್ನೋ ಬರೆಯುವಂತೆ ಪ್ರೇರೇಪಿಸುವುದರಲ್ಲೂ ಅಷ್ಟೇ ಆಸಕ್ತರು. ಪುಸ್ತಕ ವಿಮರ್ಶೆ ಹಾಗೂ ಚಾರಣದ ಅನುಭವಗಳ ಕುರಿತಾದ ಲೇಖನಗಳು ಹಲವಾರು ಜಾಲತಾಣದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ವಿಶೇಷತೆ ಏನೆಂದರೆ ಪ್ರತಿ ವರ್ಷದ ನವೆಂಬರ್ ಮಾಸದಲ್ಲಿ ಪುಸ್ತಕ ತಾಂಬೂಲ ಎನ್ನುವ ಅಭಿಯಾನ ಮಾಡುವುದು. ಓದುವ ಆಸಕ್ತಿಯಿರುವವರನ್ನು ಹುಡುಕಿ, ಇಡೀ ನವೆಂಬರ್ ತಿಂಗಳು ಪ್ರತಿದಿನವೂ ಪುಸ್ತಕ ತಾಂಬೂಲ ಕೊಡುವುದು ಅವರ ಪುಸ್ತಕ ಪ್ರೀತಿಗೆ ಸಾಕ್ಷಿ.


Literary Influences

ಡಾ. ಮಂಜುರಾಜ್

ಪ್ರಾಧ್ಯಾಪಕರು ಮತ್ತು ಖ್ಯಾತ ಸಾಹಿತಿಗಳು

ದಿವಂಗತ ಶ್ರೀ ದಕ್ಷಿಣಾಮೂರ್ತಿ

ಶಾಲಾ ಶಿಕ್ಷಕರು ಮತ್ತು ವಿದ್ವಾವಾಂಸರು

ಶ್ರೀ ತ ನಾ ಶಿವಕುಮಾರ್

ಖ್ಯಾತ ಸಾಹಿತಿಗಳು

ಶ್ರೀ ಸತ್ಯೇಶ್ ಬೆಳ್ಳೂರು

ಚಿಂತಕರು, ಮ್ಯಾನೇಜ್ಮೆಂಟ್ ಗುರು, ಸಾಹಿತಿಗಳು


Navigation

HomeAboutBlogsNewsletter

ನ್ಯಾವಿಗೇಷನ್

ಮುಖ್ಯಬಗ್ಗೆಬ್ಲಾಗ್‌ಗಳುಸುದ್ದಿಪತ್ರ

Literary Works

Featured Books

Short Stories

Essays

Connect

Email: sunilhaleyur@gmail.com

© 2025 ಸುನೀಲ್ ಹಳೆಯೂರು (Sunil Haleyur). All rights reserved.

Designed and developed by